ಮಾಜಿ ಪ್ರಧಾನ ಮಂತ್ರಿ ಶ್ರೀ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಉತ್ತಮ ಸೇವೆಯನ್ನು ಒದಗಿಸುವ ಸಂಕಲ್ಪದೊಂದಿಗೆ ವಿನೂತನವಾಗಿ ಆರಂಭವಾಗಿರುವ ಜೆಡಿಎಸ್‌ನ ಈ ಅಭಿಯಾನಕ್ಕೆ ನೀವೂ ಜೊತೆಯಾಗಿ.
“ಕರ್ನಾಟಕವೇ ಮೊದಲು” ಎನ್ನುವ ಅಭಿಮಾನ ಹೊಂದಿರುವ ಪ್ರತಿಯೊಬ್ಬರು ಮಿಷನ್ ಜೆಡಿಎಸ್‌ನ ಭಾಗವಾಗಲೂ ನಿಮ್ಮನ್ನು ಸ್ವಾಗತಿಸುತ್ತೇವೆ. ಭಾರತದ ಸಾಂವಿಧಾನಿಕ ರಚನೆಯೊಳಗೆ ನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡುವವರಿಗೆ ನಮ್ಮ ಮೊದಲ ಆದ್ಯತೆ.
ಮಿಷನ್ ಜೆಡಿಎಸ್ ಗುರಿಯೊಂದಿಗೆ ಶ್ರೀ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕರ್ನಾಟಕದ ಯುವಜನತೆ, ಮಹಿಳೆಯರು ಮತ್ತು ರೈತರ ಜೀವನ ಉಜ್ವಲಗೊಳಿಸುವ ಮೂಲಕ ನಾಡಿನ ಭವಿಷ್ಯ ಸುಭದ್ರಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಮಿಷನ್‌ನ ಭಾಗಿವಾಗಿರುವ ಪ್ರಮುಖ 3 ಹಂತಗಳಿಗೆ ನಿಮ್ಮನ್ನು ನಾವು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ. ನಮ್ಮೊಂದಿಗೆ ಸೇರಿ, ಸಂಘಟನೆಯನ್ನು ಬಲಪಡಿಸಿ ಮತ್ತು ನಮ್ಮ ಧ್ವನಿಗೆ ಶಕ್ತಿ ನೀಡಿ.
ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡಲು ಉತ್ಸುಕರೇ? “ಕರ್ನಾಟಕವನ್ನು ಮೊದಲು” ಹಾಕಲು ಸಿದ್ಧರಿದ್ದೀರಾ?
ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಲು ನಿಮಗೆ ಆಸಕ್ತಿ ಇದೆಯಾ? ಈ ಕೂಡಲೇ ‘ಕರ್ನಾಟಕವೇ ಮೊದಲು’ ಹೇಳಲು ಸಿದ್ಧವಿದ್ದೀರಾ?